ಆಶ್ರಯವು ನೀನೇ ಯೆಸಯ್ಯಾ ನನ್
ಆಧಾರವು ನೀನೇ ಯೆಸಯ್ಯಾ
ಆರಾಧನೆ ಆರಾಧನೆ ಆರಾಧನೆ
1. ನಿನ್ನಿಂದಾಗದ ಕಾರ್ಯವು ಒಂದೂ ಇಲ್ಲ
ನಿನ್ನಿಂದೆಲ್ಲವೂ ಸಾಧ್ಯವಯ್ಯ
ಇದುವರೆಗೂ ನನ್ನ ನಡೆಸಿದ
ಎಬಿನೇಜರ್ ನೀನೆನಯ್ಯಾ – ಆರಾಧನೆ
2. ಕಷ್ಟದ ದಿನದ ನನ್ನಯ ಜೊತೆಗಾರನೇ
ನನ್ನ ಕಣ್ಣೀರಿನ ಸಮಯದಲ್ಲೂ
ನನ್ನ ಕಾಣುವ ನನ್ನ ಒಡೆಯನೇ
ಎಲ್ ರೋಹಿ ನೀನೆನಯ್ಯಾ – ಆರಾಧನೆ
3. ನಿನ್ನ ಪ್ರೀತಿಯೇ ನನಗೆ ಸಾಕು ಅಯ್ಯ
ನಿನ್ನ ನೆರಳಲ್ಲೇ ಬದುಕುವೆನು
ನನ್ನ ನಡೆಸುವ ನನ್ನ ಕುರುಬನೇ
ಯೆಹೋವ ರೂವಾ ನೀನೇ – ಆರಾಧನೆ
--Ashrayavu Nine Yesayya Nan--