ದಾವೀದ ಊರಲ್ಲಿ ಲೋಕದ ರಕ್ಷಕ
ಬೆತಲಹೇಮಲ್ಲಿ ಯೇಸು ಜನಿಸಿದ… /3/
ರಾತ್ರಿಯ ವೇಳೆಯಲ್ಲಿ, ಗೋದಲಿಯ ಮಧ್ಯದಲ್ಲಿ,
ಮರಿಯಾಳ ಮಗನಾಗಿ, ಲೋಕದ ಕುರುಬನಾಗಿ,
ಶಾಪವ ನೀಗೀಸಲು, ಸೈತಾನ ತೊಲಗಿಸಲು ಬಿಡುಗಡೆಯ ಕೊಡಲು,
ಲೋಕವ ಜಯಿಸಲು.
ಬೆತಲಹೇಮಲ್ಲಿ ಯೇಸು ಜನಿಸಿದ… /2/
ಜೀವವುಳ್ಳ ದೇವನಾಗಿ, ಜೀವವನ್ನೇ ಕೊಡಲು ಬಂದ,
ಯೋಸೇಫ ಮರಿಯಾಳು ದೇವಾ ಚಿತ್ತಮಾಡಲು,
ದೇವರ ವಾಗ್ದಾನ ಬಾಳಲ್ಲಿ ಪೂರೈಯಿಸಲು,
ದು:ಖವೆಲ್ಲ ನೀಗಲೂ, ಸಂತೋಷ ನೀಡಲು.
ಬೆತಲಹೇಮಲ್ಲಿ ಯೇಸು ಜನಿಸಿದ… /2/
ದಾವೀದ ಊರಲ್ಲಿ ಲೋಕದ ರಕ್ಷಕ.
ಬೆತಲಹೇಮಲ್ಲಿ ಯೇಸು ಜನಿಸಿದ… /3/
ಸ್ತುತಿಸಿ ನಲಿದು ಹಾಡಲೂ, ಕುಣಿದು ನಾಟ್ಯವಾಡಲೂ,
ಬೆತಲಹೇಮಲ್ಲಿ ಯೇಸು ಜನಿಸಿದ… /2/
ಪಾಪ ತುಂಬಿದ ಲೋಕವನ್ನು ಬಿಡಿಸಲು,
ಧರೆಗೆ ಬಂದ ರಕ್ಷಕ,
ಅಂದು ಗೋದಲೆಯಲ್ಲಿ ಮುದ್ದು ಕಂದನಾಗಿ ಜನಿಸಿ,
ಕುರಿ ಕಾಯುವ ಕುರುಬ, ಶುಭವಾರ