ದಯಾಮಯನೆ ನನ್ನ ಓ ಯೇಸುವೇ
ದಯೆತೋರು ಈ ಪಾಪಿಯ ಮೇಲೆ
ನೀನೆ ಮಾರ್ಗ ನೀನೆ ಸತ್ಯ ನೀನೆ ಜೀವ ನೀನೆ ದೈವಾ
1.ಮಾರ್ಗವ ತಪ್ಪಿದ ಮಗನಂತೆಯೇ
ನಿನ್ನನ್ನು ಬಿಟ್ಟು ದೂರ ಹೋದೆ
ನಿನ್ನ ಮಗನೆಸಿಸಲು ಯೋಗ್ಯನಲ್ಲ
ನನ್ನನ್ನು ಕ್ಷಮಿಸಿ ಸ್ವೀಕರಿಸು – ನೀನೆ ಮಾರ್ಗ
2.ಪಾಪದ ಮಡಿಲಲ್ಲಿ ಮುಳುಗಿ ಹೋದೆ
ನನ್ನಯ ಜೀವಿತ ದುರ್ವಾಸನೆ
ನಿನ್ ರಕ್ತದಿಂದ ತೊಳೆದು ನನ್ನ
ಹಿಮದಂತೆ ಬಿಳುಪಾಗಿ ಮಾಡು ನನ್ನ – ನೀನೆ ಮಾರ್ಗ
3.ಕುರಿಗಳಿಗಾಗಿ ಜೀವ ನೀಡಿದ
ಒಳ್ಳೆಯ ಕುರುಬನೇ ಯೇಸು ದೇವಾ
ನಿನ್ನ ಪ್ರೀತಿಗೆ ಬದಲೇನು ಕೊಡುವೆನು ನಾ
ನನ್ನನ್ನು ಸಮರ್ಪಿಸುವೆ ಸ್ವೀಕರಿಸು – ನೀನೆ ಮಾರ್ಗ
ಸ್ತುತಿ ಹಾಡಿ ಹೊಗಳುವ ನಮ್ಮ ರಕ್ಷಕ.
ಬೆತಲಹೇಮಲ್ಲಿ ಯೇಸು ಜನಿಸಿದ… //2//
ದಾವೀದ ಊರಲ್ಲಿ ಲೋಕದ ರಕ್ಷಕ.
ಬೆತಲಹೇಮಲ್ಲಿ ಯೇಸು ಜನಿಸಿದ… //3//
ಸ್ತುತಿಸಿ ನಲಿದು ಹಾಡಲೂ, ಕುಣಿದು ನಾಟ್ಯವಾ