ಈ ಹೃದಯವೆಂಬ ಮನೆಯಲ್ಲಿ ಬಾ ಯೇಸು
ಇಲ್ಲಿ ಬೆಳಕಿಲ್ಲಾ ನೀ ನಿಲ್ಲದೆ
ಈ ಬದುಕಿನ ಹಗಲಲ್ಲಿ ಬಾ ಯೇಸು
ಈ ಹಗಲಲ್ಲೂ ಏಕಾಂತವೇ
ಹೊತ್ತುಹೋಗದು ನೀ ಬರದೆ ಈ ಬಾಳಲಿ
ಕತ್ತಲಾಗದು ಈ ಬದುಕು ನೀನಿದ್ದಲಿ |
1.ನೀನಿರದ ಮನೆಯಲ್ಲಿ ನಾನ್ಯಾರೋ
ಈ ಮನೆಯ ಹಂಗೆತಕೊ
ಮನೆಯೊಡೆಯ ಮನೆಯೊಳಗೆ ನೀನಿಲ್ಲದೆ
ಒಳಗೆಲ್ಲಾ ಹುಸಿಬದುಕು |
ಕಣ್ಣಲ್ಲಿ ಮಾತಲ್ಲಿ ನೀ ತುಂಬಿರೋ
ಮನದಲ್ಲಿ ದೃಡವಾಗಿರೋ |
ಆಕಾರ ನಾನು ಸಾಕಾರ ನೀನು
ನನ್ನಲ್ಲಿ ನೀನಾಗಿರೋ |
2.ಅಂತರಂಗವ ನೀ ನೋಡಲು
ಮನಸೆಲ್ಲಾ ಬರಿಶೂನ್ಯವು
ತುಂಬಿದ ಕಣ್ಣಲ್ಲಿ ನೀ ಕಾಣದೆ
ಮಾತೆಲ್ಲಾ ಅನ್ವರ್ಥವು |
ನಡೆಯಲ್ಲಿ ನುಡಿಯಲ್ಲಿ ನೀನಿಲ್ಲದೆ
ಬಹಿರಂಗ ಚೆಲುವೇತಕೋ |
ಸಾಧನ ನಾನು ಸಾಧಕ ನೀನು
ಬಂಧನ ಬಲವಾಗಿಸೋ |
--E hrudayavemba maneyalli--