ಈ ಲೋಕ ನಮಗೆ | E loka namage

Kannada Christian Song

ಈ ಲೋಕ ನಮಗೆ ಶಾಶ್ವತವಲ್ಲಣ್ಣ ಒಂದು ದಿವಸ ಬಿಡಲೇ ಬೇಕಣ್ಣ (2) 1.ಏನೂ ಇಲ್ಲದೆ ಬಂದೆವು ನಾವು ಏನು ಇಲ್ಲದೆ ಹೋಗುವೆವು (2 ನಮ್ಮ ಯೋಜನೆ ಸಾಗದು ಏನೂ ದೇವರ ಯೋಜನೆ ಸಾಗುವುದು ಎಂದೂ (2) ಮನುಜಾ…ಓ… ಮನುಜ ಈ ಲೋಕ ನಮಗೆ 2.ಪರರ ಮನಸನು ನೋಯಿಸಬೇಡ ನೋಯಿಸಿ ಶಾಪವ ಹೊಂದಲು ಬೇಡ (2) ಸ್ಥಾನ ಮಾನವ ಅಶಿಸಬೇಡ ತಿರುಗಿ ನಿರಾಶೆಯ ಹೊಂದಲು ಬೇಡ (2) ಮನುಜಾ…ಓ… ಮನುಜ ಈ ಲೋಕ ನಮಗೆ 3.ಬೇಕು ಬೇಕು ಇನ್ನೂ ಬೇಕು ಎನ್ನುವ ಆಶೆಯ ಬಿಡಲೇ ಬೇಕು (2) ಮೋಸದಿಂದ ಗಲಿಸಲೇ ಬೇಡ ಗಳಿಸಿ ಗರ್ವವ ಪಡೆಯಲೇ ಬೇಡ ಮನುಜಾ…ಓ… ಮನುಜ ಈ ಲೋಕ ನಮಗೆ --E loka namage shashvatavallaṇṇa--
Kannada