ಎಲ್ಲ ನಾಮಕ್ಕಿಂತಲೂ ಯೇಸು | Ella namakkintalu

Kannada Christian Song

ಎಲ್ಲ ನಾಮಕ್ಕಿಂತಲೂ ಯೇಸು ನಾಮವೆ ಸುಂದರ ಎಲ್ಲ ನಾಮಕ್ಕಿಂತಲೂ ಯೇಸು ನಾಮವೆ ಅದ್ಭುತ||4|| 1.ಸರ್ವಜನರೆಲ್ಲ ಸ್ತುತಿಸುವ ನಾಮ ಸಮಸ್ತವು ಸಾಷ್ಠಾಂಗ ಎರಗುವ ನಾಮ ಕೆಟ್ಟು ಹೋಗಿರುವ ಮನುಷ್ಯರನ್ನು ಹುಡುಕಿ ಬಂದು ರಕ್ಷಿಸಿದ ನಾಮ|2| ಇದುವೆ ಇದುವೆ ಯೇಸು ಎಂಬ ನಾಮ ಇದುವೆ ಇದುವೆ ರಕ್ಷಣೆಯ ನಾಮ|2| 2.ಧೀನರನ್ನು ಧೂಳಿನಿಂದ ಎತ್ತುವಂತ ನಾಮ ಬಡವರನ್ನು ಬಂಡೆ ಮೇಲೆ ನಿಲ್ಲಿಸುವ ನಾಮ ಉಚಿತ ವರಗಳಿಂದ ಶೃಂಗರಿಸಿ ನೂತನ ಬಲವನ್ನು ನೀಡುವಂತ ನಾಮ|2| ಇದುವೆ ಇದುವೆ ಯೇಸು ಎಂಬ ನಾಮ ಇದುವೆ ಇದುವೆ ರಕ್ಷಣೆಯ ನಾಮ|2| 3.ಮರಣದ ಕೊಂಡಿಯನ್ನು ಮುರಿದಂತ ನಾಮ ಪಾತಾಳದ ಶಕ್ತಿಯನ್ನು ಸೋಲಿಸಿದ ನಾಮ ಯೇಸು ನಂಬುವ ಎಲ್ಲರಿಗೂ ನಿತ್ಯಜೀವ ಕೊಡುವ ತಂದೆಯ ನಾಮ|2| ಇದುವೆ ಇದುವೆ ಯೇಸು ಎಂಬ ನಾಮ ಇದುವೆ ಇದುವೆ ರಕ್ಷಣೆಯ ನಾಮ|2| --Ella namakkintalu--
Kannada