ಎಲ್ಲಾರ ಹೇಳ್ತಾರ | ellara heḷtara svargakke

Kannada Christian Song

ಎಲ್ಲಾರ ಹೇಳ್ತಾರ ಸ್ವರ್ಗಕ್ಕೆ ಹೋಗ್ತೀನಿ ಎಲ್ಲಿಗೋಗ್ತಾರಣ್ಣಾ || ನನಗೊತ್ತಿಲ್ಲಿವರ ಬಣ್ಣ ನನಗೊತ್ತಿಲ್ಲಿವರ ಬಣ್ಣ || 1.ಕಾಣಾಕ ಒಂದು ಕಾಣ್ತಾರ ಇವರು ಹೊಂಚ ಹಾಕತಾರ || ಹೋಗ್ತೀನಿ ಅಂತಾರ ದೇವರ ಮುಂದೆ ಹೆಂಗ ನಿಲ್ಲತಾರ || ಇವರ್ ಹೆಂಗ ನಿಲ್ಲತಾರ || ಎಲ್ಲಾರ || 2.ಸುಳ್ಳಂತ ಹೇಳ್ತಾರ ಸಾವಿರ ಇವರ ಜಗಳ ಅಡತಾರ || ಕಚ್ಚತಾರ ಹಲ್ಲ ಮನದಾಗ ಇವರ ಹೆಂಗ ನಿಲ್ಲತಾರ || ಇವರ್ ಹೆಂಗ ನಿಲ್ಲತಾರ || ಎಲ್ಲಾರ || 3.ತಿರುಗಿ ಬರ್ತಾನ ಯೇಸು ಸ್ವಾಮಿ ಲೆಕ್ಕ ಕೇಳತಾನ || ಬದುಕಿರೋರಿಗೂ ಸತ್ತವರಿಗೂ ನ್ಯಾಯ ನೀಡತಾನ || ಯೇಸು ನ್ಯಾಯ ನೀಡತಾನ || ಎಲ್ಲಾರ || --ellara heḷtara svargakke--
Kannada