ಏನೂ ಇಲ್ಲದೆ ಬಂದೆ | Enu illade bande deva

Kannada Christian Song

ಏನೂ ಇಲ್ಲದೆ ಬಂದೆ ದೇವಾ ಏನೂ ಇಲ್ಲದೆ ಗತಿಸಿ ಹೋಗುವೆನು ದೇವರೇ ನಿನ್ನ ನಾಮಕ್ಕೆ ಸ್ತೋತ್ರವು |2| 1.ನಾನಂತು ನನ್ನ ವಿಮೋಚಕನು ಜೀವ ಸ್ವರೂಪನೆಂದೂ ಬಲ್ಲೆನು |2| ಆತನ ಕಡೆಗೆ ಧೂಳಿನ ಮೇಲೆ ಸಾಕ್ಷಿಯಾಗಿ ನಿಲ್ಲುವೆನು |2| || ಏನೂ || 2.ಗಾಯವ ಮಾಡುವನು ಗಾಯವ ಕಟ್ಟುವನು ಆತನ ನಾಮಕ್ಕೆ ಸ್ತೋತ್ರವು |2| ಹೊಡೆಯುವಾ ಕೈ ವಾಸಿ ಮಾಡುತ್ತದೆ. ಮನವ ಮರುಗಿ ನನ್ನ ಎತ್ತಿಕೊಂಡನು |2| || ಏನೊ || 3.ದೇವರ ಚಿತ್ತಕ್ಕೆ ಒಡಂಬಟ್ಟು ಸಮಾಧಾನವನ್ನು ಹೊಂದು ನೀ |2| ಆತನ ಮಾತನ್ನು ಕೇಳಿದರೆ ಅಯುಸ್ಕಾಲ ವೃದ್ಧಿಯಾಗ್ವದು |2| || ಏನೂ || --Enu illade bande deva--
Kannada