ಹಲ್ಲೆಲೂಯ ಸ್ತುತಿ ಮಾಡಿರಿ | Halleluya stuti madiri

Kannada Christian Song

ಹಲ್ಲೆಲೂಯ ಸ್ತುತಿ ಮಾಡಿರಿ ಯೇಸುವಿಗೆ ಸ್ತೋತ್ರ ಮಾಡಿರಿ ಹಾ – ಹಲ್ಲೆಲೂಯ ಹಲ್ಲೆಲೂಯ, ಹಲ್ಲೆಲೂಯ 1.ಶಿಲುಬೆಯ ಯಜ್ಞದಿ ನಿನ್ನ ರಕ್ತವ ಸುರಿಸಿದಿ ಪಾಪ ನಿವಾರಿಸಿ ಶುದ್ದೀಕರಿಸಿ ರಕ್ಷಣೆ ನೀಡಿದಿ ಹಲ್ಲೆಲೂಯಾ……. 2.ನನ್ನ ಜೀವಿತದಿ ಸದಾ ನಿನ್ನನ್ನೇ ಸ್ಮರಿಸುವೆನು ನಿನ್ನಾತ್ಮ ಹೊಂದಿ ನಿನ್ನ ಚಿತ್ತ ಅರಿತು ಬಾಳುವೆ ನಾನಿಂದೂ ಹಲ್ಲೆಲೂಯಾ……. 3.ಯೇಸುವ ನಂಬಿರಿ ನೀಜ ರಕ್ಷಣೆ ಹೊಂದಿರಿ ನಿತ್ಯ ಭಾಗ್ಯವ ಪಡೆಯಿರಿ ಎಂಬ ವಾರ್ತೆಯ ಸಾರುವೆವು ಹಲ್ಲೆಲೂಯಾ……. 4.ತೀರಲು ಭೂಯಾತ್ರೆ ನಿನ್ನ ಬಳಿ ನಾ ಬರುವೆನು ನಿತ್ಯ ಬಿಡಾರದಿ ನಿನ್ನಯ ಸ್ತುತಿಸುತ ನಿತ್ಯವು ವಾಸಿಸುವೆ ಹಲ್ಲೆಲೂಯಾ……. --Halleluya stuti madiri--
Kannada
20 views