ಕರುಣ ನಿಧಿಯೇ ಕರುಣಿಸು | Karua nidhiye karuisu

Kannada Christian Song

ಕರುಣ ನಿಧಿಯೇ ಕರುಣಿಸು ಮುಂಜಾನೇ ವೇಳೆಯಲ್ಲಿ ಕರುಣಿಸು ಪ್ರಸನ್ನತೆಯಿಂದ ದಯೆತೋರಿಸು |2| || ಕರುಣ ನಿಧಿಯೇ || ನಿನ್ನ ಕೃಪೆಯೊಂದೆ ಸಾಕು ದಿನವೆಲ್ಲಾ ಬದುಕಲು ಯೇಸಯ್ಯಾ |2| ನಿನ್ನ ಮಮತೆಯೊಂದೇ ಸಾಕು ದಿನವೆಲ್ಲಾ ಸ್ತುತಿಸಲು ಯೇಸಯ್ಯಾ |2| || ಕರುಣ ನಿಧಿಯೇ || ನನ್ನ ಕೈಗಳ ಎತ್ತಿವೆ ಮೊಣಕಾಲು ಊರುವೆ ಯೇಸಯ್ಯಾ |2| ನಿನ್ನ ಪಾದವ ಬಿಡೆನು ಸದುತ್ತರ ನೀಡು ಯೇಸಯ್ಯಾ |2| || ಕರುಣ ನಿಧಿಯೇ || ಪೌಳಿಯ ಒಡಕಿನಲ್ಲಿ ನಿಂತು ದೇಶಕ್ಕಾಗಿ ಪ್ರಾರ್ಥಿಸುವೆ ಯೇಸಯ್ಯಾ |2| ಉಜ್ಜೀವನ ಮಳೆಯು ಸುರಿಸು ದೇಶವನ್ನು ರಕ್ಷಿಸಲು ಯೇಸಯ್ಯಾ |2| || ಕರುಣ ನಿಧಿಯೇ || --Karua nidhiye karuisu--
Kannada