ಕರುನಮಯಾ ಯೇಸು ದುಃಖಿಸಿದನು
ಕಲ್ವಾರಿ ಬೆಟ್ಟದ ಶಿಲುಬೆಯಲ್ಲಿ
ಲೋಕದ ಪಾಪವ ತೀರಿಸಲೆಂದು
ಪರಲೋಕ ದೇವರು ಬಲಿಯಾದನು
ಸಮಾಧಾನವ ನಮಗೆ ಕೊಡಲೆಂದು
ದಂಡನೆ ಎಲ್ಲಾವ ತಾನು ಹೊತ್ತನು
ನಮ್ಮಯ ಉಲ್ಲಂಘನೆಗಾಗಿ
ಗಾಯಹೊಂದಿ ಜಜ್ಜಲ್ಪಟ್ಟನು
ದಾರಿ ತಪ್ಪಿದ ಕುರಿಗಳು ನಾವು
ಒಳ್ಳೆಯ ಕುರುಬನು ಹುಡುಕಿ ಬಂದನು
ತಪ್ಪಿದ ಕುರಿಗಳನ್ನು ವಿಮೋಚಿಸಲು
ತನ್ನಯ ಜೀವವನ್ನು ಬಲಿಕೊಟ್ಟನು
ನಮ್ಮಯ ಕಣ್ಣೀರನ್ನು ಒರೆಸಲು
ದುಃಖವನ್ನೆಲ್ಲವಾ ತಾ ಹೊತ್ತನು
ನಮ್ಮಯ ಭಾರಗಳೆಲ್ಲವನ್ನು
ಶಿಲುಬೆಯಲ್ಲಿ ಆತ ತೀರಿಸಿದನು
--Karunamaya Yesu Duhkhisidanu--