ಮೋಶೆ ಬಳಿ ಮಾತಾಡಿದ | Moshe bali maataadida oo

Kannada Christian Song

ಮೋಶೆ ಬಳಿ ಮಾತಾಡಿದ ಓ ನನ್ನ ದೇವರೆ ನನ್ನೊಂದಿಗೂ ಮಾತಾಡಯ್ಯಾ ಓ ನನ್ನ ಯೇಸುವೆ (2) ಮುಂಜಾನೆ ವೇಳೆಯಲಿ ನಿನ್ನಾಲಯಕೆ ಓಡೋಡಿ ಬಂದಿರುವೆ ನನ್ನೆಸಯ್ಯಾ (2) ಸೀನಾಯ್ ಬೆಟ್ಟದಲಿ ಇಳಿದು ಬಂದಂತವರೆ (2) ಈ ವೇಳೆಯಲ್ಲೂ ಇಳಿದು ಬಾರಯ್ಯಾ (2) ಜೇನಿನ ರುಚಿಗಿಂತಲೂ ನಿನ್ನ ವಾಕ್ಯಗಳು ಎಷ್ಟೊಂದು ಮದುರವು ನನ್ನೆಸಯ್ಯಾ (2) ಆ ನಿನ್ನ ಒಂದು ಮಾತು ನನಗೆ ಮುತ್ತು ಯೇಸು (2) ಆ ಮಾತೆ ನನ್ನ ಬಾಳ ಸಂಪತ್ತು (2) ಜೊಲು ಬಿದ್ದ ಕೈಗಳನ್ನು ಬಲಪಡಿಸಪ್ಪ ನಡುಗುವಾ ಮೊಣಕಾಲಗಳ ದೃಡಪಡಿಸಪ್ಪಾ (2) ಬಲಹೀನತೆಯಲ್ಲಿ ನಿನ್ನ ಬಲವೆ ಸಾಕಪ್ಪ (2) ಆ ಬಲವೆ ನನ್ನ ಉಸಿರು ಯೇಸಪ್ಪಾ (2) --Moshe bali maataadida oo--
Kannada