ನಂಬಿ ರಕ್ಷಣೆ ಹೊಂದುವವರು
ಪರಲೋಕಕ್ಕೆ ಬಾದ್ಯರು
ನಂಬದೆ ಹೋಗುವವರು
ಅವರು ದಂಡನೆಗೆ ಗುರಿಯಾಗ್ವರು |2|
1.ನಿಮ್ಮ ಪಾಪಗಳು ಕಡುಕೆಂಪಾಗಿದ್ದರು
ಅವು ಹಿಮದ ಹಾಗೆ ಬೆಳ್ಳಗಾಗ್ವವು |2|
ಯೇಸುವಿನ ರಕ್ತವು ಸಕಲ ಪಾಪವನ್ನು ನಿವಾರಣೆ
ಮಾಡಿ
ನಮ್ಮನ್ನು ಶುದ್ಧಿಮಾಡುವದು || ನಂಬಿ ||
2.ನೀನು ಇಂದು ಕರ್ತನಲ್ಲಿ
ನೂತನ ಸೃಷ್ಠಿಯಾದೆ ಮನುಜ |2|
ಆತನಲ್ಲಿ ನಂಬಿಕೆ ಇಟ್ಟವರು
ಅವರು ದೇವರ ಮಕ್ಕಳಾಗುವರು || ನಂಬಿ ||
3.ನನ್ನ ರಾಜನ ಬರೋಣದಲ್ಲಿ
ನೀನು ಮಹಿಮೆಯಿಂದ ಎತ್ತಲ್ಪಡುವೆ |2|
ಜೀವ ಬಾಧ್ಯರ ಪಟ್ಟಿಯಲ್ಲಿ
ನಿನ್ನ ಹೆಸರು ಬರೆದಿರ್ವದು || ನಂಬಿ ||
--Nambi rakhae honduvavaru--