ನನಗಾಗಿ ಬರಲಿರುವ | Nanagagi baraliruva

Kannada Christian Song

ನನಗಾಗಿ ಬರಲಿರುವ ಯೇಸು ನನ್ನನ್ನು ಕರೆದೊಯ್ವ ಯೇಸು ನನ್ನ ಉಸಿರಲ್ಲಿ ಹೆಸರಿರುವ ಯೇಸು ನನ್ನ ಬಾಳಲ್ಲಿ ಬೆಳಕಾದ ಯೇಸು|2| ಯೇಸು ರಾಜ ಬರುವನು ಆತನೊಂದಿಗೆ ಹಾರುವೆನು||2|| ಕಣ್ರೆಪ್ಪೆ ಬಡಿವ ಸಮಯದಲ್ಲಿ ಕರ್ತನ ಮುಖವನ್ನು ನೋಡುವೆವು ಕರ್ತಾದಿ ಕರ್ತನ ಸ್ತುತಿಸುತ್ತಾ ಆರ್ಭಟಿಸಿ ಕುಣ ದಾಡುವೆವು ಸಂಕಟವು ಇಲ್ಲ ಅಲ್ಲಿ ಬಾಧೆಯು ಇಲ್ಲ ದಾಹವಿನ್ನಿಲ್ಲಾ ಹಸಿವು ಇನ್ನಿಲ್ಲ ||ಯೇಸು|| ಬಂಗಾರದ ಬೀದಿಯಲ್ಲಿ ನಡೆದು ಜೀವಜಲದ ನದಿಯಲ್ಲಿ ಕುಡಿದು ಜೀವಜಲದ ನದಿಯಲ್ಲಿ ಕುಡಿದು ಜೀವ ವೃಕ್ಷದ ಫಲವನ್ನು ಸವಿದು ನಿತ್ಯ ನಿತ್ಯವಾಗಿ ಜೀವಿಸುವೆ ಸೂರ್ಯನು ಬೇಕಿಲ್ಲ,ಅಲ್ಲಿ ಚಂದ್ರನು ಬೇಕಿಲ್ಲ ಕಾರ್ಮೋಡವು ಇಲ್ಲ,ಅಲ್ಲಿ ಕಾರ್ಗತ್ತಲೆ ಇಲ್ಲ ||ಯೇಸು|| ದೇವರ ಮುಖವನ್ನು ನೋಡುವೆವು ನಮ್ಮ ಎಲ್ಲ ನೋವನ್ನು ಮರೆಯುವೆವು ನಾವಾತನ ಸೇವೆ ಮಾಡುವೆವು ಹರ್ಷಿಸುತ್ತಾ ಆರಾಧಿಸ
Kannada