ನನ್ನ ಯೇಸುವಿನ | Nanna yesuvina

Kannada Christian Song

ನನ್ನ ಯೇಸುವಿನ ಕೃಪೆಯೇ ನಂಗೆ ಸಾಕು ಈ ಲೋಕದೊಳು||2|| ನೀನೆ ನನ್ನ ಸಂಗಾತಿಯು ನೀನೆ ನನ್ನ ಸ್ನೇಹಿತನು ನೀನೆ ನನ್ನ ಸಂತೃಪ್ತಿಯು ನೀನೆ ನನಗೆ ಸ್ವಾಸ್ಥ್ಯವು || ನನ್ನ ಯೇಸು|| ಪ್ರೇಯಸಿಯ ಪ್ರೇಮ ಅದು ಬಾಡುವ ಹೂವಿನಂತೆ ಒಳ್ಳೆ ಸ್ನೇಹಿತನ ಸ್ನೇಹ ಅದು ಕರಗುವ ಮಂಜಿನಂತೆ ನನ್ನ ಯೇಸುವಿನ ಪ್ರೇಮ ಅದು ಶಾಶ್ವತವಾದದ್ದೊಂದೆ||2|| ||ನೀನೆ|| ಹೆತ್ತ ತಾಯಿಯ ಆ ಮಮತೆ ಅದು ಆರುವ ದೀಪದಂತೆ ಹೆತ್ತ ತಂದೆಯ ಕನಿಕರವು ಅದು ಗತಿಸುವ ನೆರಳಿನಂತೆ ನನ್ನ ಯೇಸುವಿನ ಪ್ರೇಮ ಅದು ಶಾಶ್ವತವಾದದ್ದೊಂದೆ||2|| ||ನೀನೆ|| --Nanna yesuvina krupeye--
Kannada