ನಿನ್ನ ಸಾನ್ನಿಧ್ಯಕ್ಕೆ | Ninna sannidhyakke

Kannada Christian Song

ನಿನ್ನ ಸಾನ್ನಿಧ್ಯಕ್ಕೆ ನನ್ನನ್ನು ಸೇರಿಸು ನನ್ನ ಬಯಕೆಯಾ ಯೇಸುವೇ ತೀರಿಸು ಆ ರಮ್ಯವಾದ ಸ್ಥಳವೇ ನನ್ನ ಸೌಭಾಗ್ಯವು ನನ್ನ ಬಯಕೆಯು ನನ್ನ ಬಯಕೆಯು 1.ಹಂಬಲಿಸುತ್ತಾ ಕುಂದಿತು ನನ್ನ ಆತ್ಮವು ನಿನ್ನ ಬಳಿಗೆ ಬರಲು ಕೃಪೆಯ ತೋರಿಸು ನಿನ್ನ ದರ್ಶನದಿಂದ ತೃಪ್ತಿ ಪಡಿಸು – ನಿನ್ನ 2.ನೀನು ಕಾಣದಿರಲು ಕಳೆಗುಂದುವೆನು ನಿನ್ನ ಬೆಳಕು ನನ್ನಲ್ಲಿ ಬೆಳಗ ಮಾಡಿಸು ದೇವರೇ ನಿನ್ನ ಬಿಟ್ಟರೆ ಬಾಡಿ ಹೋಗ್ವೆನು – ನಿನ್ನ 3.ನನ್ನ ಕೆಲಸದಲ್ಲಿಯೂ ನಿನ್ನನ್ನು ಮರೆಯದೆ ಎಲ್ಲಾ ಸಮಯದಲ್ಲಿಯೂ ನಿನ್ನಲ್ಲಿ ಇರಲು ಒಂದೇ ಆಸೆಯನೆಂದಿಗೂ ಬೇಡು ತ್ತಿರುವೆನು – ನಿನ್ನ --Ninna sannidhyakke nannannu serisu--
Kannada