ನಿನ್ನ ಸ್ನೇಹ | Ninna sneha sannidhyadi

Kannada Christian Song

ನಿನ್ನ ಸ್ನೇಹ ಸಾನ್ನಿಧ್ಯದಿ ಎಲ್ಲ ಮೋಹವನ್ನು ಕಳಚಿ ನಿನ್ನ ಮುಖವನ್ನು ನಾ ಹುಡುಕುವೆ ಯೇಸು ಸುಂದರನೆ ನಿನ್ನನ್ನು ಕೊಂಡಾಡುವೆ || ಯೋಗ್ಯನು ನೀನೇ ನೀ ಮಾತ್ರವೇ ಯೋಗ್ಯನು ನೀ ಮಾತ್ರವೇ || ನಿನ್ನಯ ಎದೆಯಲ್ಲಿ ನನ್ನ ತಲೆಯನ್ನು ಒರಗಿಸಿ ನಿನ್ನ ಶಭ್ದವ ನಾ ಕೇಳುವೆ ಯೇಸು ಪ್ರಿಯತಮನೆ ನಿನ್ನಲ್ಲಿ ಮೈ ಮರೆಯುವೆ || ಸ್ತುತಿಗೆ ಪಾತ್ರನು ನೀ ಮಾತ್ರವೇ ಪಾತ್ರನು ನೀ ಮಾತ್ರವೇ || ನನ್ನ ನೋವನ್ನೆಲ್ಲ ಮರೆತು ನನ್ನ ಚಿಂತೆಯೆಲ್ಲ ತೊರೆದು ನಿನ್ನಲ್ಲಿ ನಲಿದಾಡುವೆ ಯೇಸು ಸ್ನೇಹಿತನೆ ನಿನ್ನನ್ನು ಆರಾಧಿಸುವೆ || ಶುದ್ಧನು ನೀನೆ ನೀ ಮಾತ್ರವೇ ಪರಿಶುದ್ಧನು ನೀ ಮಾತ್ರವೇ || --Ninna sneha sannidhyadi--
Kannada