ಪವಿತ್ರಾತ್ಮನ ವರವ | Pavitratmane varava

Kannada Christian Song

ಪವಿತ್ರಾತ್ಮನ ವರವ ಕರುಣಿಸು ಓ ದೇವಾ ದೇವ ನಿನ್ನ ವರದಾನವನು ನೀಡಿ ಅನುಗ್ರಹಿಸು || 1.ಲೋಕಕ್ಕೆಲ್ಲಾ ನಿನ್ನ ವಚನವನ್ನು ಏಕ ದೇವರು ಯೇಸು ಎಂದು ಘೋಷಿಸಲು ಶಕ್ತಿ ನೀ ಕರುಣಿಸು ಈ ಶಿಷ್ಯರು ನಿನ್ನ ಬೇಡುವೆವು || || ಪವಿತ್ರಾತ್ಮನ || 2.ನಿನ್ನ ಸ್ಮರಣೆ ನಮಗಾನಂದ ನಿನ್ನ ಸ್ತುತಿಸಲು ಪರಮಾನಂದ ಚೈತನ್ಯ ಬೇಕೆಂದು ನೀ ಕರುಣಿಸು ನಿನ್ನ ಮಕ್ಕಳು ನಾವು ಬೇಡುವೆವು || || ಪವಿತ್ರಾತ್ಮನ || 3.ರೋಷ ದ್ವೇಷ ನೀಗಿಸಲು ಪ್ರೀತಿಯಲ್ಲಿ ಜೀವಿಸಲು ಶಾಂತಿಯು ಬೇಕೆಂದು ನಾ ಹಾಡುವೆ ಶಾಶ್ವತ ಶಾಂತಿಯ ಅನುಗ್ರಹಿಸು || || ಪವಿತ್ರಾತ್ಮನ || --Pavitratmane varava--
Kannada