ಸಾರಲೇ ಬೇಕೆಂಬ | Sarale bekemba

Kannada Christian Song

ಸಾರಲೇ ಬೇಕೆಂಬ ಶುಭವಾರ್ತೆ ನನ್ನ ಋಣ ತೀರಿಸಲೇ ಬೇಕೆಂಬ ಮನದ ಹಂಬಲ || 2 || ಯೇಸಯ್ಯಾ ಯೇಸಯ್ಯಾ ಸಾರುವೆನು ನಿನ್ನ ಶುಭವಾರ್ತೆಯ || 2 || ಮೋಶೆಯ ಹಾಗೆ ಜನರನು ನಡೆಸಲು ಯೆಹೋಶುವನಂತೆ ಪ್ರಸನ್ನತೆ ಕಾಣಲು || 2 || ಭಾರಬೇಕು ದೇವರೆ ಮನಸ್ಸು ಬೇಕು ಕರ್ತನೆ || 2 || ಯೇಸಯ್ಯಾ ಯೇಸಯ್ಯಾ ಸಾರುವೆನು ನಿನ್ನ ಶುಭವಾರ್ತೆಯ || 2 || || ಸಾರಲೇ ಬೇಕೆಂಬ || ಎಲಿಯನಾ ಹಾಗೆ ವೈರಾಗ್ಯ ಬೇಕಯ್ಯಾ ಎಲೀಷನಾ ಹಾಗೆ ಆಶೀರ್ವಾದ ಹೊಂದಲು || 2 || ಅಭಿಷೇಕ ಮಾಡಯ್ಯಾ ಆತ್ಮದಿಂದ ತುಂಬಯ್ಯಾ || 2 || ಯೇಸಯ್ಯಾ ಯೇಸಯ್ಯಾ ಸಾರುವೆನು ನಿನ್ನ ಶುಭವಾರ್ತೆಯ || 2 || || ಸಾರಲೇ ಬೇಕೆಂಬ || ಪೌಲನ ಹಾಗೆ ಸಭೆಗಳ ಕಟ್ಟಲು ದರ್ಶನ ನನಗೆ ದಯಪಾಲಿಸು || 2 || ಧೈರ್ಯವನು ನೀಡಯ್ಯಾ ಉಜ್ಜೀವನ ಗೊಳಿಸಯ್ಯಾ || 2 || ಯೇಸಯ್ಯಾ ಯೇಸಯ್ಯಾ ಸಾರುವೆನು ನಿನ್ನ ಶುಭವಾರ್ತೆಯ || 2
Kannada