ಸ್ತುತಿಸಬೇಕು ಯೇಸಯ್ಯಾ | Stutisabeku yesayya

Kannada Christian Song

ಸ್ತುತಿಸಬೇಕು ಯೇಸಯ್ಯಾ ಸ್ತುತಿಸಬೇಕು ನನ್ನಯ್ಯ ಆರಾಧನೆ || ಆ..ಆ….ಆರಾಧನೆ || 1.ಪಾಪದ ಹೃದಯ ನನ್ನಿಂದ ತೊರೆದು ನಾ ನಿನ್ನ ಸ್ತುತಿಸಬೇಕಯ್ಯ ನಿರ್ಮಲ ಮನಸ್ಸಿನಿಂದ ನಂಬಿಗಸ್ತನಾಗಿ ಜೀವದಿಂದ ಸ್ತುತಿಸಬೇಕಯ್ಯ || ಆರಾಧನೆ 4 || 2.ನಾನು ಎಂಬ ಅಹಂಕಾರ ಮರೆತು ಇಷ್ಟವಾದ ಯಜ್ಞವಾಗುವೆ ತಗ್ಗಿದ ಮನಸ್ಸಿನಿಂದ ಜಜ್ಜಿಹೋದ ಹೃದಯದಿಂದ ನಾ ನಿನ್ನ ಸ್ತುತಿಸಬೇಕಯ್ಯ || ಆರಾಧನೆ 4 || 3.ನಾಶನದ ಗುಂಡಿಯಿಂದ ಮೇಲಕ್ಕೆ ಎತ್ತಿ ನನ್ನ ಬಂಡೆಮೇಲೆ ನಿಲ್ಲಿಸಿದನು ನನ್ನ ಬಾಯಿಯಲ್ಲಿ ನೂತನ ಕೀರ್ತನೆಯ ಹುಟ್ಟಿಸಿದ ನನ್ನ ದೇವರೆ || ಆರಾಧನೆ4|| 4.ನಾನು ಪಟ್ಟ ದುಃಖ ನನ್ನ ಸುಖಕ್ಕಾಗಿಯೇ ಉಪಕಾರ ನೆನೆಸಿ ಸ್ತುತಿಸುವೆ ನನ್ನ ಆತ್ಮವನ್ನು ನಾಶನದ ಕೂಪದಿಂದ ರಕ್ಷಿಸಿದ್ದು ನಿನ್ ಪ್ರೀತಿಯೇ ||ಆರಾಧನೆ4|| --Stutisabeku yesayya--
Kannada