ತಂದೆಯ ಮನೆಯಲ್ಲಿ | Tandeya maneyalli

Kannada Christian Song

ತಂದೆಯ ಮನೆಯಲ್ಲಿ ಸುಖವಾಗಿ ಇದ್ದೇ ಅಲ್ಲಿಂದ ಹೊರ ಬಂದು ಹಾಳಾಗಿ ಹೋದೆ || ತಂದೆಯ ಮಾತನ್ನು ನಾ ಮೀರಿ ಬಂದೆ ಎಂದಿಗೂ ಮರೆಯದ ಪೆಟ್ಟನ್ನು ತಿಂದೆ || ನನ್ನ ತಂದೆಯೇ ನನ್ನ ದೇವರೇ ನನ್ನ ಕರುಣಿಸು ಇದ್ದರು ಮನೆಯಲ್ಲಿ ಮನೆ ತುಂಬಾ ಅಳು ಆಗಿತ್ತು ನಂದು ಅರಸನ ಬಾಳು || ಗೆಳೆಯರ ನಂಬಿ ನಾನದೆ ಹಾಳು ಈಗಿಲ್ಲ ನನಗೆ ತಿನ್ನಲು ಕೂಳು || ನನ್ನ ತಂದೆಯೇ ನನ್ನ ದೇವರೇ ನನ್ನ ಕರುಣಿಸು ಕೈ ತುಂಬ ಸಂಪತ್ತು ನಾ ಬೇಡಿ ತಂದೆ ಗರ್ವದಿ ನನ್ನಂತೆ ಯಾರಿಲ್ಲಾ ಎಂದೆ || ಮೋಜಿನ ಕುಡಿತಕ್ಕೆ ನಾನೆಲ್ಲ ಸುರಿದೆ ಕುಡಿತದ ಅಮಲಲ್ಲಿ ನಾನಾದೆ ಬರಿದು || ನನ್ನ ತಂದೆಯೇ ನನ್ನ ದೇವರೇ ನನ್ನ ಕರುಣಿಸು ಇನ್ನೆಲ್ಲಿ ದಾರಿ ಉಂಟಯ್ಯಾ ಎನಗೆ ಮರಣವೆ ಗತಿಯು ಬೇರಿಲ್ಲ ಕೊನೆಗೆ || ತಂದೆಯ ಬಳಿಗೆ ನಾ ಓಡಿ ಹೋಗಿ ಕ್ಷಮೆಯನು ಕೇಳುವೆ ಚರಣಕ್ಕೆ ಬಾಗಿ || ನನ್ನ ತಂದೆಯೇ ನನ್ನ ದೇವರೇ
Kannada