ತಪ್ಪಿಹೋದ ಮಗನಂತೆ | Tappihoda maganante

Kannada Christian Song

ತಪ್ಪಿಹೋದ ಮಗನಂತೆ ದೂರಾದೆ ದೇವ ಹಣ ಆಸ್ತಿ ನಂಬಿ ಹೋದೆಬರಿದಾಯಿತು ಜೀವನ || ಹಣ ಇರುವಾಗ ಜೊತೆಯಿದ್ದವರು ನಂಬಿಹೋದ ಜನ ಕೈಬಿಟ್ಟರು ನಿನ್ನ ನೋಡುವಾ ಆಸೆ ಆಗಿದೆ ಯೇಸು || 1.ಹಣದ ಮೋಹದಲ್ಲಿ ದಾರಿತಪ್ಪಿ ನಾ ಮೆರೆದೆ || ಹಣವು ನನ್ನ ಕಣ್ಣು ಕಾಣದಾ ಹಾಗೆ ಮಾಡಿದೆ || ದಿಕ್ಕು ಕಾಣದೆ ನಾ ಅಲೆಯುತ್ತಿರುವೆ ನಿನ್ನ ನೋಡುವಾ ಆಸೆ ಆಗಿದೆ ಯೇಸು 2.ಕುಡಿಯುವಾ ಚಟಕ್ಕೆ ಹಣವೆಲ್ಲಾ ನಾ ಸುರಿದೆ ಕುಡಿ ಕುಡಿದು ನಾ ಅಮಲೇರಿ ಬರಿದಾದೆ ಹೊಟ್ಟೆ ಹಸಿವಿನಿಂದ ನಾ ಬಳಲುತ್ತಿರುವೆ ನಿನ್ನ ನೋಡುವಾ ಆಸೆ ಆಗಿದೆ ಯೇಸು || 3.ಲೋಕದ ಜೀವಿತ ನನಗೀಗ ಸಾಕಾಯ್ತು ನಿನ್ನ ಜೊತೆ ಸೇರಿ ನಾ ಮಗನಾಗಿ ಬಾಳಬೇಕು ನನ್ನನ್ನು ಕ್ಷಮಿಸಿ ಯೇಸು ಸ್ವೀಕರಿಸು ನಿನ್ನ ನೋಡುವಾ ಆಸೆ ಆಗಿದೆ ಯೇಸು --Tappihoda maganante--
Kannada