ಉಜ್ಜೀವನ ಮಳೆ ಬೇಕು | Ujjivana Male Beku Nan

Kannada Christian Song

ಉಜ್ಜೀವನ ಮಳೆ ಬೇಕು ನನ್ ಕರ್ತನೆ | ನಮ್ಮ ಮೇಲೆ ಸುರಿಸಯ್ಯ ಭಾರತವ ನೆನೆಸಯ್ಯ | ಯೇಸುವೆ ಯೇಸುವೇ ನಮ್ಮನು ಅಭಿಷೇಕಿಸು | ಅಗ್ನಿಯುಳ್ಳ ಆತ್ಮನಿಂದ ನಮ್ಮನ್ನು ಅಗ್ನಿಯಾಗಿ ಮಾರ್ಪಡಿಸು |ಉಜ್ಜೀವನ| 1.ಒಣಗಿದ ಎಲುಬೆಲ್ಲ ಕಟಕಟನೆ ಶಬ್ಧವಾಗಿ ಒಂದು ದೊಡ್ಡ ಸೈನ್ಯವಾಗಿ ನಿಲಬಾರದೇ | ಶ್ವಾಸ ತಂದ ಬಿರುಗಾಳಿ ಬೀಸಬಾರದೇ | ಉಜ್ಜೀವನ ದೇಶದಲ್ಲಿ ತರಬಾರದೇ |ಉಜ್ಜೀವನ | 2.ನಿರೀಕ್ಷೆಗೂ ಮೀರಿದ ಭಯಂಕರ ಕೃತ್ಯಗಳ ನಡೆಸಿ ನಮ್ ದೇಶವನ್ನು ನೀ ನಡುಗಿಸು | ಆತ್ಮನೆ ಪ್ರವಾಹದಂತೆ ನೀ ಚಲಿಸಯ್ಯಾ | ಅಂತ್ಯಕಾಲ ಸುಗ್ಗಿಗಾಗಿ ಸಿದ್ಧಮಾಡಯ್ಯಾ | 3.ಮನುಷ್ಯರನ್ನು ಹಿಡಿಯುವ ಬೆಸ್ತರಾಗಿ ಮಾಡಯ್ಯ ಆತ್ಮಗಳ ನೀಡದಿದ್ದರೆ ಪ್ರಾಣವನ್ನು ತೆಗೆದುಕೊಳ್ಳಯ್ಯ ಏನೇ ಬಂದರು ಮುನ್ನುಗ್ಗುವ ಶಕ್ತಿ ನೀಡಯ್ಯಾ ಒಂದೇ ಬಾಳು ನಿನಗಾಗಿಯೆ ಬಾಳಬೇಕಯ್ಯಾ | --Ujjivana Male Beku
Kannada