ವಾಗ್ದಾನ ಮಾಡಿದಾತನು | Vagdana maidatanu

Kannada Christian Song

ವಾಗ್ದಾನ ಮಾಡಿದಾತನು ನಂಬಲು ಯೋಗ್ಯನು ಕಡೆಯವರೆಗೂ ನಮ್ಮನ್ನೆಲ್ಲ ಕಾಯುವಾತನು ಯೇಸು ನಿನ್ನ ವಾಕ್ಯ ನಮಗೆ ಜೀವ ವಾಗ್ದಾನವು || 1 ) ನಿನ್ನ ಕೃಪೆಯಿಂದಲೇ ಬದುಕಿ ಬಾಳಿದೆವು || ಮುಗಿಯದೆಂದೆಂದಿಗೂ ನಿನ್ನ ಕೃಪಾ ಕಾಲವು ಕೇಡು ಬಂದರು ನಿನ್ನ ಬಾಹುವು ಆತುಕೊಳ್ಳುವುದು || 2 ) ಸಂದ ವರುಷದೊಳು ಬಂದ ಬಾಧೆಗಳು || ನಿನ್ನ ಬಲದಿಂದಲೇ ನಡುಗಿ ಅಡಗಿದವು ನಿನ್ನ ಕ್ರೂಜೆಯ ಆತುಕೊಂಡೆವು ವೈರಿ ಓಡಿದನು || 3 ) ವೈರಿ ಸೈನ್ಯವನ್ನು ಎದಿರುಗೊಳ್ಳುವೆವು ಮುಂದೆ ನಡೆಯುತಲಿ ಆತ್ಮ ಬಲದೊಂದಿಗೆ ಯುದ್ಧ ವೀರನ ಹಾಗೆ ಇರುವನು ಯೇಸು ನಮ್ಮೊಂದಿಗೆ || --Vagdana maidatanu--
Kannada